Wednesday, August 13, 2014

ಮಾಯೆ ಎಂದರೇನು ? - in ಕಂಗ್ಲಿಷ್ style :)

ಮಾಯೆ ಎಂದರೇನು ? - in ಕಂಗ್ಲಿಷ್ style :)
---------------------------------------------
ಒಮ್ಮೆ ಕೃಷ್ಣಮತ್ತು ನಾರದರು ದ್ವಾರಕೆ city ಹೊರಗಿನ ಕಾಡಲ್ಲಿ, ಹಾಗೆ ಸುಮ್ಮನೆ ಸುತ್ತಾಡ್ತಿದ್ರು. ಅದು ಇದು ಲೋಕೋದ್ಧಾರದ ಮಾತುಕತೆ ನಡೀತಿರ್ಬೇಕಾದ್ರೆ, ನಾರದರು ಕೇಳಿದರು, "ಕೃಷ್ಣ, ಈ ಮಾಯೆ ಅಂದ್ರೆ ಏನು ? "
ಕೃಷ್ಣ answer ಮಾಡೋ ಬದಲು, ನಾರದ, ನನಗೆ ಬಹಳ ಬಾಯಾರಿಕೆ ಆಗಿದೆ. ಅಲ್ಲೊಂದು ಚಿಕ್ಕ ಆಶ್ರಮ ಇದ್ದ ಹಾಗೆ ಕಾಣ್ಸುತ್ತೆ. ಹೋಗಿ ನೀರು ತರಬಹುದಾ ?
ಸರಿ ಅಂತ, ನಾರದರು ಹೋದರು. ಆಶ್ರಮದಲ್ಲಿ calling bell ಇಲ್ಲ. So, ಜೋರಾಗಿ ಕೂಗಿ ಕರೆದಾಗ, ಒಬ್ಬಳು ಸುಂದರವಾದ ಋಷಿ ಕನ್ಯೆ ಬಂದಳು. ಪಾಪ ಬ್ರಹ್ಮಚಾರಿ ನಾರದರಿಗೆ love at first sight ಆಗಿ, ಕೃಷ್ಣನನ್ನು ಪೂರ್ತಿ ಮರೆತೆ ಬಿಟ್ಟರು. ("ಮುತ್ತಿಡುವವಳು ಬಂದಾಗ, ಗೆಳೆಯ/ಗುರುವನ್ನು ಮರೆತ" ಎಂಬುದು ಹೊಸ ಗಾದೆ). Any way, ಆಗಿನ ಕಾಲದಲ್ಲಿ love ವಿಚಾರದಲ್ಲಿ ಜನ್ರು ತುಂಬಾನೆ fast. ನಾರದ propose ಮಾಡಲು, ಹುಡುಗಿ ಒಪ್ಪಿ ಬಿಟ್ಟಳು. (ಭಾರಿ ಆಶ್ಚರ್ಯ ! ).
ಸಂಸಾರ ಸಾಗರದಲ್ಲಿ ಮುಳುಗಿ ಹೋದ ನಾರದರಿಗೆ, ಜಪ ತಪ ಬಿಟ್ಟು ಹೋಯ್ತು, ಹೆಂಡತಿ ಮಕ್ಕಳು, ಮನೆಯ responsibility ಬಂತು. ಧ್ಯಾನ ಮಾಡುವ ಬದಲು marketಗೆ ಹೋಗಿ ದಿನಸಿ ತರಕಾರಿ ತಂದ್ರು. "ನಾರಾಯಣ ನಾರಾಯಣ" ಹೇಳುತ್ತಿದ್ದವರು, ಹೆಂಡತಿ ಹೆಸರು ಹೇಳಲು ಶುರು ಮಾಡಿದ್ರು. ದೇವಾಸುರರ ನಡುವೆ ಜಗಳ ತಂದಿಡುವ ಬದಲು ತಾವೇ ಹೆಂಡತಿ ಜೊತೆ ಜಗಳವಾಡಿದರು !
ಹೀಗೆ ಬಹಳಷ್ಟು ವರ್ಷಗಳು ಕಳೆದು, ನಾರದರ ತಲೆಕೂದಲು ಬಿಳಿ ಆಯ್ತು. ಆವಾಗ ಒಂದು ಮಳೆಗಾಲದಲ್ಲಿ, ಎಂದೂ ನಿಲ್ಲದ spam mailನಂತೆ ಎಡೆಬಿಡದೆ ಭಾರೀ ಮಳೆ ಸುರಿಯತೊಡಗಿತು. ಭಾರೀ ಪ್ರವಾಹವೂ ಬಂತು. ನಾರದರ ಮನೆ ಕುಸಿದು ಹೋಯ್ತು. ಹೇಗೋ ತಪ್ಪಿಸಿಕೊಂಡ ನಾರದರು family ಸಮೇತ, ಹತ್ತಿರದಲ್ಲಿದ್ದ ದೊಡ್ಡದೊಂದು ಮರ ಹತ್ತಿ, search & rescue teamಗಾಗಿ wait ಮಾಡತೊಡಗಿದರು. ನಿಲ್ಲದ ಮಳೆಗೆ ನೀರಿನ ಮಟ್ಟ ಹೆಚ್ಚು ಹೆಚ್ಚು ಆಗಿ, ನಾರದರ ಹೆಂಡತಿ ಮಕ್ಕಳು ಒಬ್ಬೊಬ್ಬರಾಗಿ ಕೊಚ್ಚಿ ಹೋದರು. ಕಡೆಗೆ ನಾರದರು ಕೂಡ ನೀರಲ್ಲಿ ಮುಳುಗುವಂತಾಗಲು, ತೇಲಿ ಬರುತ್ತಿದ್ದ ಮರದ ದಿಮ್ಮಿಯನ್ನು ಹಿಡಿದು ಬಚಾವಾಗಲು ಯತ್ನಿಸುತ್ತಿದ್ದರು.
ಅಷ್ಟರಲ್ಲಿ, ಅವರಿಗೆ, ಸಡನ್ನಾಗಿ ಕೃಷ್ಣನ voice ಕೇಳಿತು. ಬೇಗ ಹೋಗಿ ಬಾ". ನಾರದರ ದೀರ್ಘ ಸಂಸಾರ ಜೀವನ, ಕೃಷ್ಣನ ಮಾತಿನ ಎರಡು ವಾಕ್ಯದ ನಡುವಿನ secondsಗಳ ಅಂತರದಲ್ಲಿ ಮುಗಿದಿತ್ತು. (ನಾರದ, ನನಗೆ ಬಹಳ ಬಾಯಾರಿಕೆ ಆಗಿದೆ. ಅಲ್ಲೊಂದು ಚಿಕ್ಕ ಆಶ್ರಮ ಇದ್ದ ಹಾಗೆ ಕಾಣ್ಸುತ್ತೆ. ಹೋಗಿ ನೀರು ತರಬಹುದಾ ? ಬೇಗ ಹೋಗಿ ಬಾ --> ಕೊನೆಯ ಎರಡು ವಾಕ್ಯಗಳ ನಡುವೆ).
So, ನಮ್ಮ ಜೀವನ ಕೂಡ ನಾರದರ ಅನುಭವದಂತೆ ಮಾಯೆಯ ಕಾರಣ ಸುದೀರ್ಘವಾಗಿರುವಂತೆ, ನಿಜವಾಗಿರುವಂತೆ ಕಾಣುತ್ತದೆ.
 

English Translation:  What is Maya?

Once Krishna and Narada were walking in forest. Narada asked "Krishna, What is Maaya? Can you explain it to me?" Krishna did not answered, instead he said "Can you bring some water from the Rishi Ashrama over there? I am very thirsty."

So Narada went to Ashrama. There he saw a beutiful girl standing in door, he forgot about Krishna and rest of the world. Narada married her and started living in Ashram. Years passed, now Narada is Grihastha with 2 children.
Once there was a great flood. It seemed whole world is being swept by angry river. The water came into Ashrama in which Narada and his family living. So they went into rooftop. The water level is slowly increasing and finally it reached the rooftop and swept the ashram. Narada trying his best to save his family, but could not. His family was washed away. Now he is showing all his swimming expertise to save his life. He found a small plant near by and trying to catch it.

Suddenly Narada was awakened by Krishna's voice. Krishna was saying "Go and come back soon."

All these years of events happened in fraction of time between Krishna's sentences "Can you bring some water from the Rishi Ashrama over there? I am very thirsty."
and "come back soon."
 

No comments: